Monday, 8 July 2013

ವಿಪರ್ಯಾಸ

ಮತ್ತೊಂದಿಷ್ಟು ತುಂಡು ಭಾವಗಳು..... 




ಕುಡಿದ ಮತ್ತಿನಲಿ ಬಂದ ಗಂಡ, ಅವಳ ತಾಳಿಯನೆ ಕಿತ್ತ... ಕದಲಲಿಲ್ಲ ಅವಳು, ಬುದ್ಧನಂತಿದ್ದಳು... ಬದುಕನ್ನೇ ಕಸಿದುಕೊಂಡಿರುವಾಗ ತಾಳಿಯೇನು ಎಂಬ ಸ್ತಿಗ್ಧ ಭಾವ... 

***


ಕೆಳಜಾತಿಯವನೆಂದು ಅವನಿಗೆ ಪ್ರಸಾದ ಕೊಡದ ಭಟ್ಟರು.. ಮನೆಗೆ ಬಂದು, ತಿಂಗಳ ಹಿಂದಷ್ಟೇ ಮಗನ ಮದುವೆಯಾದ ಅದೇ ಜಾತಿಯ ಸೊಸೆಯು ಮಾಡಿದ ಪಾಯಸ ಸವಿದರು... 


***


ಲಂಗ ದಾವಣಿ ತೊಟ್ಟು, ದುಂಡು ಮಲ್ಲಿಗೆ ಮುಡಿದ ಮೊಮ್ಮಗಳ ನೋಡಿ, ಮತ್ಯಾರನೋ ನೆನೆದ ಅಜ್ಜನ ಬೊಚ್ಚು ಬಾಯಲ್ಲೊಂದು ಮಿಂಚಂತ ಕಿರುನಗೆ... 


***


ನಿನ್ನೆಯವರೆಗೂ ಸರಿಯಾಗಿದ್ದ ಮನಸಿಗೆ, ಹೆಂಡ ಕುಡಿಸಿದವರಾರು? ನಿನ್ನ ಕಣ್ಣಂಚಿನ ನೋಟದ ನಶೆಗೇ ಇರಬೇಕು.. ನಡುನೇರ ದಾರಿಯಲು ತಿರುತಿರುಗಿ ಬಿತ್ತು... 


***


ಶಶಿಯು ತಾ ಬರಲು ಅವಳ ಮೊಗವರಳಿ, ಅವನ ನೆನಪಲೇ ಇರುಳ ಕಳೆದಳು.. ಬೆಳಕು ಹರಿಯಲು ಮನವು ಮುದುಡಿತು, ಅವಳ ಹೆಸರು ಪಾರಿಜಾತ.. 

***

ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ದೇಶಭಕ್ತಿಯ ಬಗ್ಗೆ ಗಂಟೆಗಟ್ಟಲೇ ಮಾತನಾಡಿದ ಗೆಳೆಯನೊಬ್ಬ, ಮೊನ್ನೆ  'Finally!! got Green Card!' ಎಂದು ಟ್ವೀಟಿಸಿದ್ದಾನೆ... 



21 comments:

  1. ಕೆಲವೊಮ್ಮೆ ಎಲ್ಲ ಮುಗಿದ ಮೇಲೆ ಬದುಕು ಪಾಠ ಕಲಿಸಿಬಿಡುತ್ತದೆ....
    ವಿಪರ್ಯಾಸ ಇದು ಭಟ್ಟರ ಒಕ್ಕಣೆಗೆ.....
    ಪಾರಿಜಾತ ಮುದುಡಿದರೂ ಮನವರಳಿಸಿದಳು...

    ವಿಪರ್ಯಾಸವೆಂದರೆ ಮನಸ್ಸಿಗೆ ಖುಷಿಯಾದರೆ ಇಲ್ಲಾ ದುಃಖವಾದರೆ ತಾನೇ
    ಹೆಂಡವನ್ನು ಕುಡಿಯುತ್ತೆ.. ಬೇರಾರೂ ಬೇಡ...

    ಚನ್ನಾಗನಿಸ್ತು ಬರಹ.....

    ReplyDelete
    Replies
    1. ಬದುಕು ಪಾಠ ಕಲಿಸೋದು ನಿಜ.. ಆದರೆ ಅದನ್ನೂ ಮರೆತು ಬಿಡ್ತಾರಲ್ಲ ಜನ... ಅದು ವಿಪರ್ಯಾಸ!!!

      ಇಷ್ಟಪಟ್ಟಿದ್ದಕ್ಕೆ ಧನ್ಯವಾದ... :)

      Delete
  2. gud habit, gud writing, keep it up.

    ReplyDelete
  3. chennagide. olleya havyaasa, good keep it up congrats

    ReplyDelete
    Replies
    1. welcome to my blog sir.....

      ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು... :)

      Delete
  4. ಅಂತೆ ಕಂತೆಗಳ ಸಂತೆಯಲ್ಲಿ
    ಅಂದಿದ್ದೆಲ್ಲ ಪದಗಳಾದಾಗ
    ತುಂಡುಗಳೆಲ್ಲ
    ತುಂಡಾದ ಎರೆಹುಳುವಿನಂತೆ
    ಎರಡೆರಡು ಭಾವ ಹೊತ್ತು ಸಾಗುತ್ತವೆ
    ಸೂಪರ್ ತುಂಡುಗಳು ಇಷ್ಟವಾಯಿತು

    ReplyDelete
    Replies
    1. ಇಷ್ಟಪಟ್ಟಿದ್ದಕ್ಕೆ ಧನ್ಯವಾದ...
      ನಿಮ್ಮನ್ನಿಲ್ಲಿ ನೋಡಿ ಖುಶಿಯಾಯ್ತು :)
      ಬರ್ತಾ ಇರಿ....

      Delete
  5. hey, good job of writing feeled lines come as words ....i also like to write lines to meet such words ...ok?

    ReplyDelete
  6. ಅವಳ ಬದುಕ ಬವಣೆಯ ಭಾವಕ್ಕೆ ಮೂಲ ಭಾವ ಅವನಾದುದ್ದು ವಿಪರ್ಯಾಸವಿಲ್ಲಿ ....
    ಕೆಲವೊಂದಿಷ್ಟು ಭಾವಗಳೇ ಬದುಕ ಕಲಿಸೋದೇನೋ ಅಲ್ವಾ ?

    ಭಾವವನ್ನ ನೀ ಕಟ್ಟಿಕೊಟ್ಟ ರೀತಿ ಇಷ್ಟ ಆಯ್ತು ಗೆಳತಿ ..
    ಸಂತೆಯಲ್ಲೊಂದು ನಿನ್ನದೇ ಒಡೆತನದ ಮನೆಯ ಮಾಡೋ ಕಾರ್ಯ ಮುಂದುವರೆಯಲಿ :)

    ಭಾವಗಳ ತೇರಲ್ಲಿ ಮತ್ತೆ ಮತ್ತೆ ಸಿಕ್ತಿರೋಣ :)

    ReplyDelete
    Replies
    1. ಇಷ್ಟಪಟ್ಟಿದ್ದಕ್ಕೆ ಧನ್ಯವಾದ ಕಣೇ...

      ಭಾವಗಳ ತೇರಲ್ಲಿ ಮತ್ತೆ ಸಿಗುವ... :)

      Delete
  7. Nice writings.there is a sense of feel in every word...

    ReplyDelete
  8. ಸುಂದರ ಸಾಲುಗಳು.
    "ಲಂಗ ದಾವಣಿ ತೊಟ್ಟು, ದುಂಡು ಮಲ್ಲಿಗೆ ಮುಡಿದ ಮೊಮ್ಮಗಳ ನೋಡಿ, ಮತ್ಯಾರನೋ ನೆನೆದ ಅಜ್ಜನ ಬೊಚ್ಚು ಬಾಯಲ್ಲೊಂದು ಮಿಂಚಂತ ಕಿರುನಗೆ..." ಆಹಾ.
    ಕೆಲವೊಮ್ಮೆ ಎರಡೇ ಸಾಲುಗಳು ಅದೆಷ್ಟೋ ಭಾವಗಳನ್ನ ತಿಳಿಸಿ ಹೇಳುತ್ತವೆ. ಅಂಥಹ ಸಾಲುಗಳಲ್ಲಿ ಇವುಗಳೂ ಒಂದು.
    ಉತ್ತಮ ಪ್ರಯತ್ನ. ಹೀಗೆ ಬರೆಯುತ್ತಿರಿ.
    ಶುಭವಾಗಲಿ.

    ReplyDelete
    Replies
    1. ಇಷ್ಟಪಟ್ಟಿದ್ದಕ್ಕೆ ಧನ್ಯವಾದ...

      ಬರ್ತಾ ಇರಿ....

      Delete
  9. tundu bhaavagalalle tumbu jeevana... chendada saalugalu.. :)

    ReplyDelete
  10. matured writing,, loved it.. keep going

    ReplyDelete