Tuesday, 18 June 2013

ಅವ್ಯಕ್ತ







ಮಳೆ ನಿಂತಿದೆ.. 
ಅವನು ಹಿಡಿದ ಕೊಡೆ ಹಾಗೇ ಇದೆ..

ಅವಳು ಸ್ವಾಭಿಮಾನಿ.. 
ಅವನದು ತೀರ ಹಟ..

ಅವಳು ಇಷ್ಟವಿಲ್ಲದೆ ಹೊರಟವಳು..
ಅವನು ಅವಳಿಗಾಗಿ ನಿಂತವನು..

ಅವಳು ಕನಸ ಬೆಂಬತ್ತಿ ಬದುಕ ದಾರಿ ಹಿಡಿದವಳು..
ಅವನು ಒಲವೇ ಜೀವನವೆಂದು ತಿಳಿದವನು..

ಅವಳು ಕಟ್ಟಿಕೊಂಡ ಗುರಿ ಸಾಧಿಸುವ ಛಲದವಳು..
ಅವನು ಬೆಟ್ಟದಷ್ಟು ಪ್ರೀತಿ ಕೊಡುವವನು.. 

ಅವಳು ಪ್ರತಿ ಹೆಜ್ಜೆಗೂ ಹತ್ತು ಬಾರಿ ಯೋಚಿಸುವವಳು.. 
ಅವನು ಹಿಂದೆ ಮುಂದೆ ನೋಡದೆ ಒಲವ ತೋಡಿಕೊಂಡವನು..

ಅವಳು  ಗುರಿಯ ನೆಪವೊಡ್ಡಿ ತಿರಸ್ಕರಿಸಿದವಳು..
ಅವನು ಬೆಂಬಿಡದೆ ಗೋಗರೆದವನು..

ಅವಳು ಭವಿಷ್ಯದೆಡೆಗೆ ಮುಖಮಾಡಿ ಹೊರಟವಳು..
ಅವನು ದಾರಿ ಮರೆತು ಅಲ್ಲಿಯೇ ನಿಂತವನು.. 

ಮತ್ತೆ ಮಳೆ ಹನಿ ಜಿನುಗಿದೆ..
ಇಬ್ಬರೂ ಮಳೆಗೆ ಮುಖವೊಡ್ಡಿದರು..
ಕಣ್ಣಂಚಿನ ಹನಿ ಕಾಣದಂತೆ ತಿರುಗಿ ಹೊರಟರು..

11 comments:

  1. ಕಣ್ಣ ಹನಿಯೊಂದಿಗೆ....
    ಮನಸು ಮಾತಾಡಿದೆ.....
    ಹೇಳಿಕೊಳ್ಳೋಕೆ ಏಕೆ ನೀನು ಹಠ ಮಾಡಿದೆ...?
    ತುಂಬು ಪ್ರೀತಿಯ ಹುಡುಗ.... ದಟ್ಟ ಛಲದ ಹುಡುಗಿ...
    ಬದುಕಿನ ಬಗ್ಗೆ ಆಲೋಚನೆ ಅವಳಿಗೆ... ಅವನ ಬದುಕೇ ಅವಳಿಗೆ...
    ಸಾಧಿಸುವ ಹುಡುಗಿ... ಪ್ರೀತಿಸುವ ಹುಡುಗ...

    ಚಂದ ಚಂದ ಪಾಪೂ.....
    ಅವ್ಯಕ್ತವಾಗಿದ್ದ ಭಾವನೆಗಳು ವ್ಯಕ್ತವಾಗಿವೆ.....
    ಈ ಬಗ್ಗೆ ತುಂಬಾ ಖುಷಿಯಿದೆ ನನಗೆ...

    ReplyDelete
    Replies
    1. ಹಮ್..ಅವಳ ಅವ್ಯಕ್ತ ಭಾವವೇ ಕಣ್ಣಂಚಲಿ ವ್ಯಕ್ತವಾಯ್ತೇನೊ!
      ಧನ್ಯವಾದ..

      Delete
  2. ತುಂಬಾ ದಿನಗಳ ನಂತರ ಸಂತೆಯಲ್ಲೊಂದು ಕಂತೆಯನ್ನ ನೋಡಿರೋ ಖುಷಿ ನಂದು .

    ಅವ್ಯಕ್ತದ ಹುಡುಗಿ ತುಂಬಾ ಹತ್ತಿರ ಅನಿಸಿದ್ಲು ಮನಸ್ಸಿಗ್ಯಾಕೋ ....
    ಭಾವಗಳ ಮೆರವಣಿಗೆ ಇಷ್ಟವಾಯ್ತು

    ಉತ್ಸಾಹ ಹೀಗೆಯೇ ಇರ್ಲಿ.
    ಬರವಣಿಗೆ ಮುಂದುವರೆಸು

    ReplyDelete
    Replies
    1. ಪುಸ್ತಕಗಳ ಕಂತೆಯ ಮಧ್ಯ ಕಳೆದುಹೋಗಿ, ಶಬ್ಧಗಳ ಮರೆತಿದ್ದೆ..ಮಳೆ ಬಿತ್ತು ನೋಡು, ಭಾವಂಕುರವಾಗಿರಬೇಕು... ;)

      ಧನ್ಯವಾದಗಳು ಭಾಗ್ಯ.. ಪ್ರಯತ್ನ ಜಾರಿಯಲ್ಲಿದೆ..

      Delete
  3. ಇಷ್ಟವಾಯ್ತು ಭಾವಲಹರಿ...

    ReplyDelete
  4. ಅವಳು ಭವಿಷ್ಯದೆಡೆಗೆ ಮುಖಮಾಡಿ ಹೊರಟವಳು.. ಆದರೆ ಅವನ ಭವಿಷ್ಯ ಅವಳೇ ಅಂತ ಅರಿಯದೆ ಹೋದಳಾ ??? ಗುರಿ ಸಾಧನೆಗೆ ಛಲದ ಜೊತೆಗೆ ಪ್ರೀತೀನೂ ಮುಖ್ಯ ಅಲ್ಲವೆ ? ಬರವಣಿಗೆ ಚೆನ್ನಾಗಿದೆ ಮುಂದುವರೆಸಿ. :)

    ReplyDelete
  5. ಅವಳು ಗುರಿಯ ನೆಪವೊಡ್ಡಿ ತಿರಸ್ಕರಿಸಿದವಳು..
    ಅವನು ಬೆಂಬಿಡದೆ ಗೋಗರೆದವನು..

    Aamele yaaru enaadaru?

    ReplyDelete