Thursday, 6 June 2013

ಹೀಗೊಂದು ಭಾವ...

ಮತ್ತೆ ಮತ್ತದೇ ಭಾವ
ನೀ ನಕ್ಕ ಹಾಗೆ, ಬಳಿ ನಿಂತ ಹಾಗೆ...
ನಿನ್ನೊಡನೆ ಕಟ್ಟಿರುವ ನೂರಾರು ಕನಸಿಗೆ, 
ಮನಸ ಮೂಲೆಯಿಂದ ನುಸುಳುವ ಭಾವ...
ಮುಂಜಾನೆ ರವಿಕಿರಣ ಮುತ್ತಿಡುವ ಹೊತ್ತಲಿ ,
ನಿನ್ನಯ ಬೆಚ್ಚನೆ ಸ್ಪರ್ಶದ ಭಾವ...
ಮುಸ್ಸಂಜೆ ತಂಗಾಳಿಯಲಿ ಅಲೆಯುತಿರಲು,
ನೀ ಬಂದು ಹಾಡೊಂದ ಗುನುಗುನಿಸಿದ ಭಾವ...
ಕಡಲ ತೀರದ ಮರಳಲಿ,
ನೀನಟ್ಟ ಹೆಜ್ಜೆಯ ಅನುಸರಿಸಿದ ಭಾವ...
ಭಾವ ಭಾವನೆಗಳ ತೊಟ್ಟಿಲಲಿ ಒಂದಾಗುವ ಭಾವ
ಹೇಳು ಗೆಳೆಯಾ ಜೊತೆಯಾಗುವೆಯಾ?

8 comments:

  1. ಮತ್ತೆ ಮತ್ತೆ ನೆನಪಾಗುವ ಆ ಭಾವದಲಿ ಎಷ್ಟು ಭಾವಗಳು ನೋಡು..
    ನೀನಿಷ್ಟು ಭಾವದಲಿ ಕರೆದ ಮೇಲೆ ಬರದೇ ಇದ್ದಾನೆಯೇ....
    ಬಂದೇ ಬರುತ್ತಾನೆ...

    ಚಂದದ ಭಾವ ಬರಹ.....

    ReplyDelete
    Replies
    1. ಭಾವಪೂರ್ಣ ಪ್ರತಿಕ್ರಿಯೆಗೆ ಧನ್ಯವಾದ :)

      Delete
  2. Bhaavagala beru innashtu aalavaagali... chanda putti...:)

    ReplyDelete
  3. ಭಾವಗಳ ಚೆಲ್ಲಾಟ,
    ಮನದಲಿ ತೊಳಲಾಟ.

    ReplyDelete
    Replies
    1. ಭಾವ ಭಾವನೆಗಳ ಹೊಯ್ದಾಟ..

      ಪ್ರತಿಕ್ರಿಯೆಗೆ ಧನ್ಯವಾದ :)

      Delete
  4. Bhavanegalu badhukige aadhaara...
    Bhavagalu manasige madhura...

    ReplyDelete
  5. Bhavanegalu badhukige aadhaara...
    Bhavagalu manasige madhura...

    ReplyDelete