ಪುಸ್ತಕಗಳ ರಾಶಿಯ ಮಧ್ಯ ಸೇರಿಹೋಗಿತ್ತದು. ಎನನ್ನೋ ಹುಡುಕುವಾಗ ನನ್ನ ಕಣ್ಣಿಗೆ ಬಿತ್ತು. ಧೂಳು ಕುಡುಗಲು ಹೋಗಿ, ಒಂದೆರಡು ಸೀನ್ ಹೊಡೆದು, ಅದನ್ನ ಕೈಗೆತ್ತುಕೊಂಡೆ. ರಟ್ಟು ಹರಿದ ಹಳೆಯ ಪುಟ್ಟ ಪಟ್ಟಿ. ಏನಿರಬಹುದು ಎಂಬ ಕುತೂಹಲ. ಓದಲು ಕುಳಿತಾಗ ಹುಲ್ಲು ಕಡ್ಡಿಯೂ ವೆರಿ ಇಂಟೆರೆಸ್ಟಿಂಗ್ ನೋಡಿ !
ಮೊದಲ ಪುಟ...
ಖಾಲಿ ಪೇಜಿನ ಮೊಲೆಯಲ್ಲಿ ಸ್ಫುಟವಾಗಿ ಬರೆದ ಅಕ್ಷರಗಳು. ಈಗ ಮಬ್ಬಾಗಿವೆ.
ಹೆಸರು :
ತರಗತಿ :
ವಿಷಯ :
ನನ್ನದೇ. ಅರಿವಿಲ್ಲದಂತೆಯೇ ತುಟಿಯಂಚಲಿ ನಗುವು ಮೂಡಿತ್ತು. ಮನದ ಗೂಡಿನಿಂದ ನೆನಪ ಇರುವೆಗಳು ಸಾಲಾಗಿ ಹೊರಬರತೊಡಗಿದ್ದವು. ಹಮ್, ನೆನಪಿದೆ. ಅಪ್ಪನ ಅಕ್ಷರಗಳವು. ಶಾಲೆ ಶುರುವಾಗುವ ಮೊದಲೇ ಪಟ್ಟಿ ಪುಸ್ತಕಗಳನ್ನು ತರಿಸಿ, ಅಮ್ಮ ಬೈಂಡ್ ಹಾಕಿ ಕೊಟ್ಟರೆ, ಅಪ್ಪ ಹೆಸರು ಬರೆದು ಕೊಡುತ್ತಿದ್ದ. ರಜೆ ಮುಗಿದು ಶಾಲೆಗೆ ಹೊರಡುವ ಸಂಭ್ರಮ. ಶಿಕ್ಷಕರು ಹೊಗಳಿದರೆ ಅಟ್ಟಕ್ಕೇರುವ ದಿನಗಳವು . ಕ್ಲಾಸಿನಲ್ಲಿ ಎಲ್ಲರಿಗಿಂತ ಮೊದಲು ಉತ್ತರಿಸಿದರೆ ತಲೆಯ ಮೇಲೆರಡು ಕೊಂಬು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದರೆ ಯುದ್ಧ ಗೆದ್ದ ಸಂಭ್ರಮ. ಆ ಮುಗ್ಧತೆಯ ನೆನೆಪಿಸಿಕೊಳ್ಳುತ್ತಾ ಪುಟ ತಿರುವಿದೆ.
ಪುಟ ಎರಡರ ನಂತರ...
ಅವು ನಾ ಬರೆದ ಸಾಲುಗಳು. ಕನ್ನಡವೋ, ಪರಿಸರವೋ ತಿಳಿಯಲಿಲ್ಲ. ಯಾವುದೊ ಪಾಠದ್ದಿರಬೇಕು. ಅಕ್ಷರಗಳು ಅಷ್ಟೇನೂ ಸುಂದರವಾಗಿರಲಿಲ್ಲ. ತಪ್ಪುಗಳಿದ್ದಲ್ಲಿ ಟೀಚರ್ ತಿದ್ದುಕೊಟ್ಟಿದ್ದರು. ಹಲವಾರು ಹೋಮ್ ವರ್ಕ್, ಕ್ಲಾಸ್ ವರ್ಕ್ಗಳು ಪುಟ ತುಂಬಿದ್ದವು. ಒಮ್ಮೆ 'ಗುಡ್' , 'ವೆರಿ ಗುಡ್' ಬಿದ್ದರೆ ಮತ್ತೊಮ್ಮೆ 'ಸುಧಾರಿಸಬೇಕು' ಎಂಬ ರೆಡ್ದಿಂಕಿನ ಮಾರ್ಕು.
ಮೊದಲು ಆಟ, ಸಮಯವಿದ್ದರೆ ಪಾಠ ಎನ್ನುವ ಜಾತಿ ನಂದು (ಮೊದಲಿನಿಂದಲೂ ಹಾಗೇ ;-) ). ಟೀಚರ್ ಗೆ ಹೆದರದಿದ್ದರೂ ಅವರ ಬೆತ್ತಕ್ಕೆ ಹೆದರುತ್ತಿದ್ದೆ. ಒಮ್ಮೆ ಹೋಮ್ ವರ್ಕ್ ಮಾಡದೇ ಸುಳ್ಳು ಹೇಳಿ, ಕೈಗಳು ನೋಡಿದ್ದ ಅವರ ಬೆತ್ತದ ರುಚಿ ಇನ್ನೂ ಮರೆತಿಲ್ಲ .
ಪುಟ ಮೂವತ್ತರ ಆಸುಪಾಸು..
ಒಂದೆರಡು ಪುಟಗಳು ಹರಿದಿದ್ದವು. ನಂತರ ಮತ್ತದೇ ಪಾಠದ ಸಾಲುಗಳು. ಆದರೆ ಕಾಟಾಚಾರಕ್ಕೆ ಬರೆದ್ದಿದ್ದೇನೋ ಅನ್ನುವಂತಿತ್ತು. ಹಾಗೇ ತಿರುವುತ್ತ ಹೋದೆ.
ಐವತ್ತರಾಚೆಗಿನ ಪುಟಗಳು ಖಾಲಿ ಖಾಲಿ...
ಕೊನೆಯ ಪುಟ..
ಎಲ್ಲವೂ ಚೆಲ್ಲಾಪಿಲ್ಲಿ. ಒಂದಿಷ್ಟು ಚಿತ್ರಗಳು, ಮತ್ತಷ್ಟು ಹೆಸರುಗಳು. ಅಲ್ಲಲ್ಲಿ ಗೀಚಿದ್ದು, ಚುಕ್ಕಿ ಆಟ ಆಡಿದ್ದು ಎಲ್ಲವೂ ಸ್ಪಷ್ಟ.
ಹೆಸರುಗಳನ್ನ ಹೆಕ್ಕಿ ಓದಿದೆ. ಒಂದಿಬ್ಬರನ್ನ ಬಿಟ್ಟರೆ ಮತ್ಯಾರೂ ಸಂಪರ್ಕದಲ್ಲಿಲ್ಲ. ಕೆಲವರು ನೆನೆಪಿಗೂ ಬರುತ್ತಿಲ್ಲ. ಎಲ್ಲಾ ಎಲ್ಲಿರಬಹುದು? ಅವರಿಗೆ ನನ್ನ ನೆನಪಿದೆಯಾ? ಎಂದುಕೊಳ್ಳುತ್ತಾ ಪಟ್ಟಿ ಮುಚ್ಚಿಟ್ಟೆ.
ಆದರೂ ನನ್ನ ಯೋಚನಾಲಹರಿ ಹರಿಯುತ್ತಲೇ ಇತ್ತು. ಜೀವನಕ್ಕೂ ಈ ಹಳೆ ಪಟ್ಟಿಗೂ ಎಲ್ಲೋ ಬಹಳ ಸಾಮ್ಯವಿದೆ ಅನ್ನಿಸ್ತು. ಬದುಕೇ ಒಂದು ಪಟ್ಟಿಯಾದರೆ, ಪ್ರತಿದಿನವೂ ಒಂದೊಂದು ಪುಟಗಳು. ಅಂತಸ್ತು, ಒಣ ಪ್ರತಿಷ್ಠೆಯ ಬೈಂಡ್ ಹಾಕಿಕೊಂಡು ಸಮಾಜದಲ್ಲಿ ಬದುಕುವ ಹುನ್ನಾರ. ಒಳಗೆ ಹರಿದ ಬನಿಯನ್ ಆದರೂ ಸರಿ, ಹೊರಗೆ ಚಂದದ ಶರ್ಟ್ ಇರಬೇಕು ಎನ್ನುವಂತೆ!
ಬಾಲ್ಯವೇ ಮೊದಲ ಪುಟ. ಬಹುಶಃ ಜೀವನದ ಅತ್ಯಂತ ಸುಂದರ ಕ್ಷಣಗಳು. ಅಮ್ಮನ ಮಮತೆ, ಅಪ್ಪನ ಪ್ರೀತಿ, ಹೊಸ ಜಗತ್ತು, ಮುಗ್ಧ ಮನಸಿನ ಸ್ವಚ್ಛ ನಗು ಎಲ್ಲವೂ ಅತಿ ಚೆನ್ನ. ಒಟ್ಟಿನಲ್ಲಿ ಕುಹಕ, ಕಪಟ, ಕೆಟ್ಟ ಆಲೋಚನೆಗಳಿಗೆ ಅಲ್ಲಿ ಜಾಗವಿರಲಿಲ್ಲ. ನಾವಂದು ಪೋಷಕರ ಕನಸು.
ನಂತರದ್ದು ಹರೆಯ. ತಪ್ಪ ಸರಿಪಡಿಸಿ ಸರಿ ದಾರಿ ತೋರಲು ಹಲವಾರು ಕೈಗಳು. ಬದುಕ ರಾಗದಲ್ಲಿ ಕೊಂಚ ಏರಿಳಿತ. ಗೆದ್ದರೂ ಸೋತರೂ ಹೆಚ್ಚು ತಲೆ ಕೆಡಿಸಿಕೊಳ್ಳದ ಭಾವ. ಸಮಾಜಕ್ಕೆ ಅಂಜಿ 'ಡೋಂಟ್ ಕೇರ್' ಮನಸ್ಥಿತಿಗೂ ಒಂದು ಮಿತಿ, ಥೇಟ್ ಪುಟ ಎರಡರಂತೆ. ಅಲ್ಲಿಗೆ ಬರೀ ನಾನು ನನ್ನ ಕನಸು.
ಅತಿಯಾದ ಹುಮ್ಮಸ್ಸು. ಜೀವನದಲ್ಲಿ ರಿಸ್ಕ್ ಇಲ್ಲದೇ ಮಜವೆಲ್ಲಿ ಎನ್ನುವ ಮನೊಭಾವ . ಕೆಲವು ತಪ್ಪು ನಿರ್ಧಾರಗಳು ಮತ್ತು ಸೋಲು. ಆತ್ಮ ವಿಶ್ವಾಸದಿಂದ ಸೋಲನ್ನು ಹತ್ತಿಕ್ಕಿ ಮತ್ತೆ ಗೆದ್ದವನು ಹೊಸ ಭಾಷ್ಯ ಬರೆದರೆ, ಸೋತವನ ಬದುಕಿನ ಪುಟ ಅಲ್ಲಿಗೆ ಹರಿದಂತೆ. ಅಲ್ಲಿ ನನ್ನ ಕನಸು ನನ್ನದು.
ನಂತರದ್ದು ಯಾಂತ್ರಿಕ ಬದುಕು ಖಾಲಿ ಹಾಳೆಯಂತೆ . ಆಫೀಸಿನ ಮುಗಿಯದ ಕೆಲಸ, ಸಂಸಾರದ ತಲೆಬಿಸಿ ಹೀಗೆ ಟನ್ಗಳಷ್ಟು ಜವಾಬ್ದಾರಿಗಳು. ಕಲರ್ ಫುಲ್ ಬದುಕಲ್ಲಿ ಕೊನೆಗೆ ಉಳಿಯುವುದು ಕಪ್ಪು ಬಿಳುಪು ನೆನಪಿನ ಕಂತೆಗಳು. ಕನಸ ದಾರಕೆ ನೆನಪ ಪೋಣಿಸುತ, ಬೊಚ್ಚು ಬಾಯಲ್ಲೊಂದು ನಗೆಯ ಚಿಮ್ಮಿಸಿ ಮೊಮ್ಮಕ್ಕಳ ಆಡಿಸುವಲ್ಲಿ ಬದುಕ ಪಟ್ಟಿಗೊಂದು ಪೂರ್ಣ ವಿರಾಮ.
ಅಷ್ಟರಲ್ಲಿ ಅಮ್ಮನ ಕೂಗು, "ಅದೇನೇ ಓದೋದ್ ಬಿಟ್ಟು ಒಬ್ಬಳೇ ನಗ್ತಿದ್ದೀಯ?" ಎಂದಳು . "ಏನಿಲ್ಲ, ಹಳೆ ಹುಡುಗ ನೆನಪಾದ" ಎಂದೆ. ಅವಳಿಗದು ಕೇಳಲಿಲ್ಲ. ಟಿವಿಯಲ್ಲಿ 'ರಾಧಾ ಕಲ್ಯಾಣ' ಬರುತ್ತಿತ್ತು.

ಅರ್ಚನಾ ,
ReplyDeleteಮೊದಲಿಗೆ ನಿಂಗೊಂದು ಪ್ರೀತಿಯ ನಮನ ..
ಅಂತೆ ಕಂತೆಗಳ ಸಂತೆಯನ್ನ ನೀ ಮುಂದುವರೆಸಿದ್ದು ತುಂಬಾ ತುಂಬಾ ಖುಷಿ ಆಯ್ತು :)
ಅದೆಷ್ಟು ಚೆನ್ನಾಗಿ ನಿರೂಪಿಸಿದ್ದೀಯ ಅಂದ್ರೆ ಭಾವವನ್ನ ಹಾಗೆ ಮನದಲ್ಲಿ ಅಚ್ಚೊತ್ತಿ ಬಿಟ್ಟೆ ...
ನೀ ಹೇಳಿದ್ದು ಎಲ್ಲರ ಭಾವ ..
ಅಂತರಂಗದ ಪ್ರತಿನಿಧಿಯಾಗಿ ಹೇಳಿದಂತಿದೆ ಕಣೆ ..
ಅಂದ ಹಾಗೆ ಹೊಸ ಹುಡುಗನ ಬದಲು ಯಾಕೆ ಅದೇ ಹಳೆ ಹುಡುಗ ನೆನಪಾದ ;)
ಹಾ ಹಾ ...
ಮೃದು ಮಧುರ ನೆನಪುಗಳ ಮೆರವಣಿಗೆ ಇಷ್ಟವಾಯ್ತು ..
ಇನ್ನಷ್ಟು ಭಾವಗಳ ನಿರೀಕ್ಷೆಯಲ್ಲಿ .....
'ಭಾಗ್ಯ'ದ ಗೆಳತಿ,
Deleteನಿನ್ನೀ ಪ್ರೀತಿಗೆ ನಾ ಆಭಾರಿ...ನೀ ಇಷ್ಟಪಟ್ಟರೆ ನಂಗೂ ಖುಷಿ...
ಹೊಸ ಹುಡುಗನ್ನ ಮರೆತರೆ ತಾನೆ ನೆನಪಾಗೋಕೆ ;)
ಧನ್ಯವಾದ ಕಣೆ..
ಅರ್ಚನಾ -
ReplyDeleteಕಳೆದು ಬಂದ ಜೀವನದ ಮಧುರ ಕಾಲಘಟ್ಟದ ಸೊಬಗನ್ನ ಅಕ್ಷರಗಳಲ್ಲಿ ಹಿಡಿದಿಟ್ಟ ಬಗೆ ಇಷ್ಟ ಆತು...
:::
ಜೀವನಕ್ಕೂ ಈ ಹಳೆ ಪಟ್ಟಿಗೂ ಎಲ್ಲೋ ಬಹಳ ಸಾಮ್ಯವಿದೆ ಅನ್ನಿಸ್ತು. ಬದುಕೇ ಒಂದು ಪಟ್ಟಿಯಾದರೆ, ಪ್ರತಿದಿನವೂ ಒಂದೊಂದು ಪುಟಗಳು. ಅಂತಸ್ತು, ಒಣ ಪ್ರತಿಷ್ಠೆಯ ಬೈಂಡ್ ಹಾಕಿಕೊಂಡು ಸಮಾಜದಲ್ಲಿ ಬದುಕುವ ಹುನ್ನಾರ. ಒಳಗೆ ಹರಿದ ಬನಿಯನ್ ಆದರೂ ಸರಿ, ಹೊರಗೆ ಚಂದದ ಶರ್ಟ್ ಇರಬೇಕು ಎನ್ನುವಂತೆ!
ಕಲರ್ ಫುಲ್ ಬದುಕಲ್ಲಿ ಕೊನೆಗೆ ಉಳಿಯುವುದು ಕಪ್ಪು ಬಿಳುಪು ನೆನಪಿನ ಕಂತೆಗಳು. ಕನಸ ದಾರಕೆ ನೆನಪ ಪೋಣಿಸುತ, ಬೊಚ್ಚು ಬಾಯಲ್ಲೊಂದು ನಗೆಯ ಚಿಮ್ಮಿಸಿ ಮೊಮ್ಮಕ್ಕಳ ಆಡಿಸುವಲ್ಲಿ ಬದುಕ ಪಟ್ಟಿಗೊಂದು ಪೂರ್ಣ ವಿರಾಮ....
ಈ ಸಾಲುಗಳು ತುಂಬಾನೇ ಹಿಡಿಸಿದವು...
ಹಳೆ ಹುಡುಗ ಎಂಬುದು ನೆನಪು...ಹೊಸ ಹುಡುಗ ಕನಸು ಅಥವಾ ವಾಸ್ತವ...ಕನಸು ಅನಿಶ್ಚಿತ, ವಾಸ್ತವ ಸ್ವಲ್ಪ ಕಷ್ಟ...ಹಾಗಾಗಿ ನೆನಪೇ ಮಧುರವಾಗಿ ಕಾಣುತ್ತೆ...ಹಳೆ ಹುಡುಗನೂ ಹಾಗೇ - ಹಳೆ ಬದುಕಿನಂತೆ...
ಇಷ್ಟವಾಯಿತು ಭಾವ ಬರಹ...
ಹಮ್.. ಕಾಲ ಬದಲಾಗಬಹುದು, ಮನುಷ್ಯ ಬದಲಾಗಬಹುದು, ಆದರೆ ನೆನಪುಗಳು ಮಾತ್ರ ಬದುಕ ಪುಟದಲ್ಲಿ ಶಾಶ್ವತ....
Deleteಇಷ್ಟಪಟ್ಟಿದ್ದಕ್ಕೆ ಧನ್ಯವಾದ... :)
Idha odhida balika raddhiyali biddiruva nanna haleya pustakagalu omme nanna nodi nakkanthayitu. Vinodada nageyo vishaadada nageyo tiliyalilla ....
ReplyDeleteಅವುಗಳನ್ನ ಎತ್ತಿಟ್ಟುಕೊಳ್ಳಿ... ಮುದುಕರಾದ ಮೇಲೆ ನೋಡಿ ನಗೋಕೆ ಬೇಕಾಗತ್ತೆ.. :D
Deleteಪ್ರತಿಕ್ರಿಯೆಗೆ ಧನ್ಯವಾದ..
tumba chennagide barahada lahari..munduvaresi :-)
ReplyDeleteಧನ್ಯವಾದ... :)
Delete"ಅಂತಸ್ತು, ಒಣ ಪ್ರತಿಷ್ಠೆಯ ಬೈಂಡ್ ಹಾಕಿಕೊಂಡು ಸಮಾಜದಲ್ಲಿ ಬದುಕುವ ಹುನ್ನಾರ"
ReplyDeleteತುಂಬಾ ಅರ್ಥವತ್ತಾದ ನೈಜ ಹೋಲಿಕೆ.... ನಮ್ಮತನವನ್ನೇ ಪ್ರದರ್ಶಿಸಿಕೊಂಡು
ಬದುಕುವ ಮಂದಿ ತುಂಬಾ ಕಡಿಮೆ....
ಬರಹ ತುಂಬಾ ಚನ್ನಾಗಿದೆ...
ನಿನ್ನ creative thinking ಗೆ ಖುಷಿಯಾಯ್ತು...
ಮುಂದುವರೆಯಲಿ ಅಕ್ಷರ ಸಂಹಾರ........
ಹಮ್,ಸುತ್ತಮುತ್ತಲಿನ ಅದೆಷ್ಟೋ ವಸ್ತುಗಳು ನಮ್ಮದೇ ಪ್ರತಿಬಿಂಬವಾಗಿರತ್ತೆ... ಗಮನಿಸಿರೊಲ್ಲ ಅಷ್ಟೇ..!
Deleteಇಷ್ಟಪಟ್ಟಿದ್ದಕ್ಕೆ ಧನ್ಯವಾದ... :)
ಓದಿ ಮುಗಿಸುವ ಹೊತ್ತಿಗೆ ಮೊದಲ ಪುಟಕು ಕೊನೆಯ ಪುಟಕು ನಡುವೆ ಎನಿತೋ ಅಂತರ ..
ReplyDeleteಬಂದು ಹೋಗುವ ಸ್ನೇಹ ಸಾವಿರ ...
ಎಂಬ ಬಂಧನ ಚಿತ್ರಗೀತೆ ತುಟಿಯಂಚಲ್ಲಿ...
ಹಳೆ ಪಟ್ಟಿ... ಅದರ ಮೊದಲ ಪೇಜು ... ಕೊನೆ ಪೇಜು ... ಅದಕ್ಕೊಂದು ಸುಂದರ ಬೈಂಡಿಂಗ್...
ಎಷ್ಟು ಚಂದನೆಯ ನೆನಪುಗಳು...
ಅದೆಲ್ಲವನ್ನು ಬದುಕಿಗೆ ಹೋಲಿಸಿದ್ದು ತುಂಬಾ ಇಷ್ಟವಾಗಿದ್ದು.. " ಬದುಕೇ ಒಂದು ಪಟ್ಟಿಯಾದರೆ, ಪ್ರತಿದಿನವೂ ಒಂದೊಂದು ಪುಟಗಳು. ಅಂತಸ್ತು, ಒಣ ಪ್ರತಿಷ್ಠೆಯ ಬೈಂಡ್ ಹಾಕಿಕೊಂಡು ಸಮಾಜದಲ್ಲಿ ಬದುಕುವ ಹುನ್ನಾರ. ಒಳಗೆ ಹರಿದ ಬನಿಯನ್ ಆದರೂ ಸರಿ, ಹೊರಗೆ ಚಂದದ ಶರ್ಟ್ ಇರಬೇಕು ಎನ್ನುವಂತೆ!" ಕಾಡುತ್ತವೆ ಸಾಲುಗಳು ...
ಪೆನ್ನಲ್ಲಿ ತಪ್ಪು ಬರೆದು ಆಮೇಲೆ ಚಿತ್ತು ಕಾಟು ಮಾಡಿ ಪುಟದ ಅಂದ ಹಾಳು ಮಾಡಿದ್ದು ನೆನಪಿದೆ. ಪೆನ್ಸಿಲ್ ಲ್ಲಿ ಬರೆದರೆ ಅಳಿಸಲೊಂದು ಎರೆಸರ್ ಅದ್ರು ಇರ್ತಿತ್ತು ಅಂತ ಕಾಡಿದ್ದು ಇದೆ ..
ಬದುಕಿನ ಪುಟಗಳನ್ನೂ ಪೆನ್ಸಿಲ್ ಲ್ಲಿ ಬರೆದು ತಪ್ಪಾದರೆ ತಿದ್ದುವ ಎರೆಸರ್ ಗಳು ಇದ್ದಾರೆ..
ಆದರೆ ಮಾರ್ಕರ್ ನಲ್ಲಿ ಬರೆದದ್ದು ತಪ್ಪಾದರೆ .... ??? :( :(
ಹೌದು ಸಂಧ್ಯಕ್ಕ,
Deleteಬದುಕೆಂದರೆ ಹಾಗೇ ಅಲ್ವಾ?
ಕೊನೆಯಲ್ಲಿ ಉಳಿಯುವುದು ಅಳಿಸಲಾರದ ಕೆಲವು ಸಿಹಿ-ಕಹಿ ನೆನಪುಗಳು.. ಜೊತೆಯಲ್ಲೊಂದಿಷ್ಟು ಕನಸುಗಳು..
ಚಂದದ ಪ್ರತಿಕ್ರಿಯೆಗೆ ಧನ್ಯವಾದ.. :)
ಚಂದದ ಬರಹ. ಒಮ್ಮೆ ಶಾಲಾ ದಿನಗಳನ್ನ ನೆನಪಿಸಿದೆ ನೋಡು. ಈ ಬಗ್ಗೆ ಹೇಳ ಹೋದರೆ ತುಂಬಾ ಇದೆ.
ReplyDeleteವಿಷಯ ಮಂಡನೆ ಹಿಡಿಸಿತು.ಪಟ್ಟಿಯಲ್ಲಿನ ಪೇಜಿಗೂ ನಮ್ಮ ಜೀವನಕ್ಕೂ ನೀಡಿದ ಉಪಮೆಗಳು ಚೆನ್ನಾಗಿವೆ. ಇನ್ನಷ್ಟು ಬರೆ.. ಶುಭವಾಗಲಿ.
ಧನ್ಯವಾದ.. :)
Deleteಅರ್ಚನಾ...
ReplyDeleteಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುವದರಲ್ಲಿನ "ಹೊಸತನ" ಬಹಳ ಇಷ್ಟವಾಯಿತು...
ಅಭಿನಂದನೆಗಳು..
ಧನ್ಯವಾದ ಪ್ರಕಾಶಣ್ಣ,.. :)
DeleteRandomly came to this blog....But now, Wow!!
ReplyDeleteಮುಂದಿನ ಬಾರಿ ಊರಿಗೆ ಹೋದ ತಕ್ಷಣ ಮಾಡುವ ಕೆಲಸ- ನಾನಿನ್ನೂ ಬಿಸಾಡದೆ ಕಾದಿಟ್ಟಿರುವ ನನ್ನ ಹಳೆಯ ಪಟ್ಟಿಗಳನ್ನು ಕಪಾಟಿನಿಂದ ತೆಗೆದು ಮೊದಲ ಪುಟದಿಂದ ಕೊನೆಯ ಪುಟದವರೆಗೂ ಒಮ್ಮೆ ಕಣ್ಣಾಯಿಸುವುದು!... Thanks for sending the readers back into the unforgettable lovely childhood days...
thank you ji...
Deleten welcome to my blog :)
ಕೇವಲ 'ಚೆನ್ನಾಗಿದೆ' ಅಂತಷ್ಟೇ ಹೇಳಿ ಮನಸ್ಸು ತಣಿಯುತ್ತಿಲ್ಲ. ಜಾಸ್ತಿ ಹೇಳಲು ತಿಳಿಯುತ್ತಿಲ್ಲ. ಓದಿ ಮುಗಿಯುವಷ್ಟರಲ್ಲಿ ಕಿರುನಗೆಯೊಂದು ಮೂಡಿದೆ.. 'ತುಂಬಾ ಚೆನ್ನಾಗಿದೆ'..
ReplyDeleteಇಷ್ಟಪಟ್ಟಿದ್ದಕ್ಕೆ ಧನ್ಯವಾದ...ಬರ್ತಾ ಇರಿ :)
Deleteಒಂದಕ್ಕಿಂತ ಒಂದು ಚೆಂದದ ಬರಹಗಳು..ಎಲ್ಲದರ ನಡುವೆ ಇದು ಬಹಳ ಭಿನ್ನವಾಗಿ ತೋರ್ತು :)
ReplyDeleteಬದಲಾಗೋ ಬದುಕಿನ ಪುಟಗಳನ್ನು ಕಣ್ಣಿಗೆ ಕಟ್ಟೋ ಹಾಗೆ ಚಿತ್ರಿಸಿದ್ದೆ ಗೆಳತಿ (ಗೆಳತಿ ಆನ್ಲಕ್ಕು ಅನ್ಕತ್ತಿ)...
Hats off to a wonderful presentation :)
Wonderful Archana...
ReplyDeleteHi, I'm Ravindra Bhat. Today added your blog spot to my reading list.
ReplyDeletethe above blog is good.
By the way you can see my blogs at http://ravindrambhat.blogspot.in
I am a new blogger. Your suggestions are welcome.
Nice presentation.......
ReplyDelete