ಭಾನುವಾರ ಬೆಳಿಗ್ಗೆ. ಕಷ್ಟಪಟ್ಟು ಮುಸುಕು ತೆಗೆದು, ಒಂದೇ ಕಣ್ಣಲ್ಲಿ ಮೊಬೈಲ್ ನೋಡಿದರೆ ಒಂದ್ ಡಜನ್ ಮಿಸ್ಡ್ ಕಾಲ್ಸ್ ಮತ್ತು ಒಂದೈವತ್ತು ನೋಟಿಫಿಕೇಶನ್ಗಳು. ಯಾರಪ್ಪಾ ಹೊಗೆ ಹಾಕ್ಸ್ಕೊಂಡ್ರು ಅಂತ ನೋಡಿದ್ರೆ 'ಹ್ಯಾಪಿ ಫ್ರೆಂಡ್ಶಿಪ್ ಡೇ' ಮೆಸೇಜ್ಗಳ ಜೊತೆ ಈಡಿಯಟ್, ಸ್ಟುಪಿಡ್, ಡಬ್ಬಾಸ್ ಪದಗಳು ಕಿಸಿ ಕಿಸಿ ನಗುತ್ತಿದ್ದವು. ಫೇಸ್ಬುಕ್ ವಾಲ್ ಮೇಲೂ ಅವುಗಳದೇ ಚಿತ್ತಾರ. ಇನ್ನು ಬ್ಲಾಗ್ ಕಡೆ ಬಂದ್ರೆ ಸ್ನೇಹ ಭಾವಗಳು ಧುಮ್ಮಿಕ್ಕಿ ಹರಿಯುತ್ತಿದ್ದವು.. ಇಂತಹ ಸಂದರ್ಭದಲ್ಲಿ, ಈಗೆನ್ಮಾಡ್ಲಿ ಅಂತ ತಲೆ ಕೆರೆದುಕೊಂಡಾಗ ಹುಟ್ಟಿದ್ದೇ ಈ ತರ್ಲೆ ಬರಹ!
hi, hello ಗಳಿಂದ ಶುರುವಾಗಿ, ಪಕ್ಕಾ ಲೋಕಲ್ ಪಡ್ಡೆಗಳ ತರಹ ಮಗಾ, ಮಚ್ಚಿಗಳ ತನಕ ಬಂದು ನಿಂತ ಸ್ನೇಹದ ಯಶೋಗಾಥೆ!!!
ಅವರದೇ ಗುಡ್ ಮಾರ್ನಿಂಗ್ ನಿಂದ ಶುರುವಾಗಿ, ಮತ್ತವರದೇ ಗುಡ್ ನೈಟ್ ನೊಂದಿಗೆ ಮುಗಿಯುವ ಅದೆಷ್ಟೋ ದಿನಗಳು... ದಿನವಿಡೀ ಹರಟಿದ್ದು... ಜೊತೆಯಾಗಿ ನಕ್ಕಿದ್ದು... ಒಂದೇ ಪ್ಲೇಟಿನಲ್ಲಿ ಪಾನಿಪುರಿ ತಿಂದಿದ್ದು... ಮಳೆಯಲ್ಲಿ ಪೂರ್ತಿ ನೆನೆದು ಮನೆಯಲ್ಲಿ ಒಟ್ಟಿಗೆ ಬಯ್ಸಿಕೊಂಡಿದ್ದು... ಎಲ್ಲವೂ ಮನದ ಪರದೆಯ ಮೇಲಿನ ಸುಂದರ ಕೊಲಾಜ್...
ಹಮ್.... ನಾನು...... ಫಸ್ಟ್ ಬೆನ್ಚ್ನಲ್ಲೇ ಕುಳಿತು ನನ್ನ ಪಾಡಿಗೆ ನಾನು ನಿದ್ದೆ ಮಾಡೋ ಅಷ್ಟು ಡೀಸೆಂಟ್.. ಪ್ರಶ್ನೆಯೇ ಗೊತ್ತಿಲ್ಲದಿದ್ದರೂ ಹತ್ತು ನಿಮಿಷ ಉತ್ತರ ಕೊಡುವಷ್ಟು ಇಂಟೆಲಿಜೆಂಟ್.. ಮತ್ತು ಲಾಸ್ಟ್ ಬೆಂಚ್ ಅಲ್ಲಿ ಕೈ ಕಟ್ಟಿಕೊಂಡು ಕೂರುವಷ್ಟು ಇನ್ನೋಸೆಂಟ್..!!!!
ಇನ್ನು ನನ್ನ ಗೆಳೆಯರ ಬಳಗವನ್ನ ಕೇಳ್ಬೇಕಾ? ಒಟ್ಟಿನಲ್ಲಿ ನಾವೆಲ್ಲರೂ 'partners in crime!'
ಬರೆದ ಪದ್ಯ ಓದಿ, ಲೈಟ್ ಆಗ್ ಹಾಳಾಗ್ತಿರೋ ಹಾಗಿದೆ ಅಂತ ಡೌಟ್ ಪಡ್ತಾ, ಹಳೇ ಹುಡುಗನ ಹೆಸರು ಹೇಳಿ ಕಾಲೆಳೆಯುತ್ತಾ, ಒಂದೇ ಸ್ಟೇಟಸ್ ಕೆಳಗೆ ನೂರು ಕಾಮೆಂಟ್ ಮಾಡೋವಷ್ಟು ತರಲೆಗಳು..
ಎಕ್ಸಾಂ ತೋಪೆದ್ದಿದ್ದಕ್ಕೂ ಪಾರ್ಟಿ ಕೇಳಿ, ೫ ರುಪಾಯಿ ಡೈರಿ ಮಿಲ್ಕನ್ನೂ ಹಂಚ್ಕೊಂಡ್ ತಿಂದು, ಮಧ್ಯ ರಾತ್ರಿಲಿ ಮ್ಯಾಗಿ ತಿನ್ತಾ, ಆಕಾಶ ನೋಡಿ ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕೋರ್ ನಾವು...
ಲೂಸ್ ಮಾದನಿಂದ ಹಿಡಿದು ಬ್ರಾಡ್ ಪಿಟ್ ವರೆಗೂ, ಸಾನಿಯಾ ಸ್ಕರ್ಟ್ ನಿಂದ ಹಿಡಿದು ಸೋನಿಯಾ ಸೀರೆಯವರೆಗೂ... ನಮ್ಮ ಬಾಯಲ್ಲಿ ಚರ್ಚೆಯಾಗದ ವಿಷಯಗಳಿಲ್ಲ... 'take it easy' ಸಿದ್ಧಾಂತ ನಮ್ದು... ಒಬ್ಬರು ಮಿಸ್ ಆದ್ರು ಮಜವಿಲ್ಲ... ಒಂಥರಾ ವೋಡ್ಕಾ- ಐಸ್ ಕ್ಯೂಬ್ ರಿಲೇಶನ್ಶಿಪ್ಪು ;)
ಇಂತಹ ಹುಚ್ಚು ಗೆಳೆಯರೊಡನೆ , ಫೋನಿನಲ್ಲೇ ಶುಭಾಶಯ ವಿನಿಮಯ ಮಾಡಿಕೊಳ್ಳುವುದರೊಂದಿಗೆ 'ಸ್ನೇಹಿತರ ದಿನ' ಮುಗಿದೇ ಹೋಯ್ತು. 'Tom & Jerry' ಕಾರ್ಟೂನನ್ನ ರೇಡಿಯೋದಲ್ಲಿ ಕೇಳಿದ ಹಾಗೆ!
ಅಂದಹಾಗೆ ಎಲ್ಲ ಬ್ಲಾಗ್ ಮಿತ್ರರಿಗೂ ಸ್ನೇಹಿತರ ದಿನದ ಶುಭಾಶಯಗಳು (ಸ್ವಲ್ಪ ತಡವಾಗಿ)... ಬಾಳ ದಾರಿಯಲಿ ಸ್ನೇಹ ದೀವಿಗೆಯ ಹಚ್ಚಿ ಮುನ್ನಡೆಯೋಣ... ಪ್ರೀತಿ, ಪ್ರೋತ್ಸಾಹ ಹೀಗೆಯೇ ಇರಲಿ :)